ಸ್ಥಳೀಯವಾಗಿ ಥೇರ್ ಎಂದು ಕರೆಯಲ್ಪಡುವ ಅಗ್ರೋಹಾ ಒಂದು ಪುರಾತತ್ತ್ವ ತಾಣವಾಗಿದ್ದು ಇದು ಭಾರತದ ಹರಿಯಾಣ ರಾಜ್ಯದ ಹಿಸಾರ್ ಜಿಲ್ಲೆಯ ಅಗ್ರೋಹಾದಲ್ಲಿದೆ. == ಐತಿಹಾಸಿಕ ಮಹತ್ವ == ಹಿಸಾರ್‌ನ ಅಧಿಕೃತ ಜಾಲತಾಣದ ಪ್ರಕಾರ, ಅಗ್ರೊಹಾದಲ್ಲಿನ ಉತ್ಖನನಗಳು ಕ್ರಿ.ಪೂ 3 ರಿಂದ 4 ನೇ ಶತಮಾನದಿಂದ ಕ್ರಿ.ಶ 13 ರಿಂದ 14 ನೇ ಶತಮಾನದವರೆಗಿನ ಅವಧಿಗೆ ಸೇರಿವೆ. ರಕ್ಷಣಾ ಗೋಡೆ, ದೇಗುಲ ಕೋಶಗಳು ಮತ್ತು ವಸತಿ ಮನೆಗಳನ್ನು ದಿಬ್ಬದಲ್ಲಿ ವೀಕ್ಷಿಸಬಹುದು. == ಗಮನಾರ್ಹ ಪ್ರಾಕ್ತನ ಕೃತಿಗಳು == ಉತ್ಖನನದ ಅವಧಿಯಲ್ಲಿ ಸುಮಾರು ಏಳು ಸಾವಿರ ಪ್ರಾಕ್ತನ ಕೃತಿಗಳನ್ನು ಪಡೆಯಲಾಗಿದೆ. === ನಾಣ್ಯಗಳು === ತಾಣದಲ್ಲಿ ವಿವಿಧ ಅವಧಿಗಳಿಗೆ ಸೇರಿದ ಬೆಳ್ಳಿ ಮತ್ತು ಕಂಚಿನ ನಾಣ್ಯಗಳು ಪತ್ತೆಯಾಗಿವೆ. ಇವು ರೋಮನ್, ಕುಶಾನ, ಯೌಧೇಯ ಮತ್ತು ಗುಪ್ತ ಸಾಮ್ರಾಜ್ಯಕ್ಕೆ ಸೇರಿವೆ. ಬಳಸಲಾದ ಭಾಷೆ ಪ್ರಾಕೃತವಾಗಿದೆ. === ಮುದ್ರೆಗಳು === ಅನೇಕ ಮುದ್ರೆಗಳು ಸಹ ಸಿಕ್ಕಿವೆ. ಇವುಗಳ ಮೇಲೆ ಪಿತ್ರದತ್, "ಸಾಧು ವೃಧಸ್ಯ", "ಶಾಮ್ಕರ್ ಮಲಸ್ಯ", "ಮದ್ರಸ್ಯ" ಮುಂತಾದ ಪದಗಳಿಂದ ಕೆತ್ತಲಾಗಿದೆ. === ಇತರೆ === ಅಸಂಖ್ಯಾತ ಕಲ್ಲಿನ ಶಿಲ್ಪಗಳಲ್ಲದೆ, ಕಬ್ಬಿಣ ಮತ್ತು ತಾಮ್ರದ ಉಪಕರಣಗಳು ಮತ್ತು ಅರೆ-ಅಮೂಲ್ಯ ಕಲ್ಲುಗಳ ಮಣಿಗಳು ಸಹ ಸಿಕ್ಕಿವೆ. == ಉಲ್ಲೇಖಗಳು == === ಗ್ರಂಥಸೂಚಿ === , (2004). : . . 978-0-7619-3223-9.